Uncategorized

BV Kakkilaya Oration 2022

BV Kakkilaya Inspired Oration – 2022

Prof. Apoorvanand : Innards of contemporary social discourse

Salient points from Pro. Apoorvanand’s oration:
It’s the internal fears, anxieties, deficiencies, weaknesses, helplessness, difficulties, sufferings that drive hatred, which is perceived as a tool for survival.
Love is natural, but loving many is not easy. Hate doesn’t come naturally, hatred is taught, so is compassion.
Humans are animals with a sense of history, we are now constructing history to justify hatred.
Since we can’t fight a war with outsiders, we are creating wars within, creating enemies within. We are investing in nothing else but only hate in this war. These agents of hate enter inside you and make you hate others.
Hitler didn’t happen suddenly. But when that happened, Germany and Europe have had to reckon how they produced a Hitler and a Mussolini. Here 2014 didn’t happen suddenly and we shall be held accountable in the future.
The othering is so much that many now believe that Amir Khan and Shah Rukh Khan are actually villains and have cheated to make believe that they are heroes. Sexual inadequacy and primal sexual desires contribute to such hatred towards these successful men. Boycotting their films is a way for hopefully demasculating such Muslim heroes.
Such hate and insecurities are instigated and we must know how to avoid or overcome them.
Opposite of hate is not love. One can at least start by detachment. Give up the obsession with others, start liking oneself instead. Disinterest is all that is enough to stop hating. Indifference can save us at least for now.
Our Constitution should guide us on this. Actual text of the Constitution is in its preamble and the rest is only a footnote. Our Constitution hopes for unqualified liberty, equality, justice and solidarity. These are the values we must inculcate and work for.
When lies are being repeated ad nauseum we need to repeat the truth fearlessly.
Leaders like BV Kakkilaya gave up their wealth and pleasures, went down to live with the working class, suffered with them, went to jail for them and from all these, these leaders had nothing to gain personally, but this is how they learnt compassion and worked for liberty, equality, justice and solidarity.
ಪ್ರೊ. ಅಪೂರ್ವಾನಂದ್ ಬಿವಿ ಕಕ್ಕಿಲ್ಲಾಯ ಉಪನ್ಯಾಸ 
ಆಗಸ್ಟ್ 27, 2022, ಮಂಗಳೂರಲ್ಲಿ
ಇಂದಿನ ಸಾಮಾಜಿಕ ವಿದ್ಯಮಾನಗಳ ಆಂತರ್ಯ:
ಮುಖ್ಯಾಂಶಗಳು: 
ಒಬ್ಬನ ಒಳಗಿರುವ ಭಯ, ಆತಂಕ, ನ್ಯೂನತೆಗಳು, ದೌರ್ಬಲ್ಯಗಳು, ಅಸಹಾಯಕತೆ, ಕಷ್ಟಗಳು, ಕೊರಗುವಿಕೆ ಇತ್ಯಾದಿ ಆತನೊಳಗೆ ದ್ವೇಷವನ್ನು ಹುಟ್ಟಿಸಬಹುದು, ಈ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ತಂತ್ರವಾಗಿ ಅದು ಬಳಕೆಯಾಗಬಹುದು.
ಪ್ರೀತಿ ಸಹಜವಾಗಿಯೇ ಮೂಡುತ್ತದೆಯಾದರೂ ಹಲವರತ್ತ ಪ್ರೀತಿಯನ್ನು ಸೂಸುವುದು ಸುಲಭವಲ್ಲ. ದ್ವೇಷ, ಹಗೆತನಗಳು ಸಹಜವಾಗಿ ಬರುವುದಿಲ್ಲ, ಅವನ್ನು ಬೆಳೆಸಲಾಗುತ್ತದೆ. ಅನುಕಂಪವೂ ಅಷ್ಟೇ, ಅದನ್ನು ಕಲಿಸಬೇಕಾಗುತ್ತದೆ.
ಮನುಷ್ಯರು ಇತಿಹಾಸ ಪ್ರಜ್ಞೆಯುಳ್ಳ ಪ್ರಾಣಿಗಳು, ಹಾಗಾಗಿಯೇ ಈಗ ದ್ವೇಷವನ್ನು ನ್ಯಾಯಬದ್ಧಗೊಳಿಸುವುದಕ್ಕೆ ಇತಿಹಾಸವನ್ನೇ ಸೃಷ್ಟಿಸಲಾಗುತ್ತಿದೆ.
ಈಗ ಹೊರಗಿನವರೊಂದಿಗೆ ಯುದ್ಧ ಮಾಡಲು ಸಾಧ್ಯವಿಲ್ಲ, ಹಾಗಾಗಿ ಒಳಗಿನವರೊಂದಿಗೆಯೇ ಯುದ್ಧಕ್ಕೆ ಹೊರಡುತ್ತಿದ್ದೇವೆ, ಅದಕ್ಕಾಗಿ ಒಳಗೆಯೇ ವೈರಿಗಳನ್ನು ಸೃಷ್ಟಿಸಲಾಗುತ್ತಿದೆ. ಈ ಯುದ್ಧಕ್ಕೆ ಬೇರೆ ಯಾವ ಹೂಡಿಕೆಯೂ ಬೇಕಾಗುವುದಿಲ್ಲ, ದ್ವೇಷವಷ್ಟೇ ಸಾಕಾಗುತ್ತದೆ. ಈ ದ್ವೇಷದ ಜಂತುಗಳು ಒಮ್ಮೆ ಒಳಹೊಕ್ಕಿದರೆ ಬೇರೆಯವರನ್ನು ದ್ವೇಷಿಸುವಂತೆ ಪ್ರೇರೇಪಿಸುತ್ತಲೇ ಇರುತ್ತವೆ.
ಹಿಟ್ಲರ್ ಒಮ್ಮಿಂದೊಮ್ಮೆಗೆ ಉದಯಿಸಿದ್ದಲ್ಲ. ಆದರೆ ಅದು ಘಟಿಸಿದಾಗ ಜರ್ಮನಿ ಮತ್ತು ಯೂರೋಪು ಈ ಹಿಟ್ಲರ್ ಮತ್ತು ಮುಸೊಲಿನಿಗಳನ್ನು ಹುಟ್ಟಿಸಿದ್ದು ಹೇಗೆ ಎನ್ನುವುದಕ್ಕೆ ಉತ್ತರಿಸಬೇಕಾಯಿತು, ಅದನ್ನು ಎದುರಿಸಬೇಕಾಯಿತು. ಇಲ್ಲಿಯೂ 2014 ಒಮ್ಮಿಂದೊಮ್ಮೆಗೆ ಆಗಲಿಲ್ಲ, ಇದರ ಪರಿಣಾಮಗಳಿಗೆ ಭವಿಷ್ಯದಲ್ಲಿ ನಾವು ಉತ್ತರ ಹೇಳಬೇಕಾಗುತ್ತದೆ.
ಈಗ ಅವರು ನಾವು ಎಂಬ ವಿಭಜನೆ ಎಷ್ಟಾಗಿದೆಯೆಂದರೆ ಅಮೀರ್ ಖಾನ್, ಶಾರುಖ್ ಖಾನ್ ಹೀರೋಗಳಲ್ಲ, ಖಳನಾಯಕರು, ಅದು ಹೇಗೋ ಎಲ್ಲರನ್ನೂ ಮೋಸ ಮಾಡಿ ಹೀರೋಗಳೆಂದು ನಂಬುವಂತೆ ಮಾಡಿಬಿಟ್ಟಿದ್ದಾರೆ ಎಂಬಲ್ಲಿಗೆ ತಲುಪಿದೆ. ಒಳಗಿನ ಲೈಂಗಿಕ ನ್ಯೂನತೆಗಳು, ಕಾಮವಾಂಛೆಗಳು ಈ ಸ್ಫುರದ್ರೂಪಿಗಳನ್ನು ದ್ವೇಷಿಸುವಂತೆ ಮಾಡುತ್ತವೆ. ಅವರ ಚಿತ್ರಗಳನ್ನು ಬಹಿಷ್ಕರಿಸುವಂತೆ ಕರೆ ಕೊಡುವುದರ ಹಿಂದೆ ಅವರ ಪುರುಷತ್ವವನ್ನು ಕುಂದಿಸುವ ಬಯಕೆಯೇ ಅಡಗಿರುತ್ತದೆ.
ಇಂಥ ಅಸುರಕ್ಷತೆ, ಭಯಗಳು ಹೊರಗಿನಿಂದ ಪ್ರೇರಿತವಾಗುವುದರಿಂದ ಅವನ್ನು ತಡೆಯುವುದು ಮತ್ತು ನಿಯಂತ್ರಿಸುವುದು ಹೇಗೆನ್ನುವುದು ನಮಗೆ ತಿಳಿದಿರಬೇಕು.
ದ್ವೇಷಕ್ಕೆ ಪ್ರತಿಯಾಗಿ ಪ್ರೀತಿಯನ್ನು ಬೆಳೆಸುವುದು ಸುಲಭವಲ್ಲ. ಕನಿಷ್ಟ ಪಕ್ಷ ದ್ವೇಷಕ್ಕೆ ನಿರ್ಲಿಪ್ತರಾಗಿರುವುದು, ಅದನ್ನು ದೂರವಿಡುವುದು ಮಾಡಿದರೂ ಸಾಕಾಗುತ್ತದೆ. ಅನ್ಯರ ಬಗ್ಗೆಯೇ ಗೀಳು ಹೊಂದಿರುವುದಕ್ಕಿಂತ ತಮ್ಮತಮ್ಮ ಬಗ್ಗೆ ಯೋಚಿಸಿದರೂ ಸಾಕಾಗುತ್ತದೆ. ನಿರಾಸಕ್ತಿಯಿದ್ದರೂ ಸಾಕು, ಅನ್ಯರೆಡೆಗೆ ದ್ವೇಷವನ್ನು ಹತೋಟಿಯಲ್ಲಿಡಬಹುದು.
ನಮ್ಮ ಸಂವಿಧಾನದ ಮೌಲ್ಯಗಳೇ ಇದಕ್ಕೆ ದಾರಿದೀಪವಾಗಬಹುದು. ಸಂವಿಧಾನದ ಮೂಲ ಆಶಯಗಳೇ ಮುಖ್ಯ, ಉಳಿದದ್ದೆಲ್ಲವೂ ಅವುಗಳ ಅಡಿಟಿಪ್ಪಣಿಗಳಷ್ಟೇ. ಈ ಮೂಲ ಆಶಯಗಳಾದ ನಿಶ್ಶರ್ತ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಹಾಗೂ ಭ್ರಾತೃತ್ವಗಳನ್ನು ನಾವು ಮೈಗೂಡಿಸಿಕೊಳ್ಳಬೇಕು.
ಸುಳ್ಳುಗಳನ್ನು ನಿರಂತರವಾಗಿ ಹೇಳುತ್ತಲೇ ಸಾಗುತ್ತಿರುವಾಗ ಸತ್ಯವನ್ನು ಹೇಳುತ್ತಲೇ ಸಾಗುವ ಧೈರ್ಯವಿರಬೇಕು.
ಬಿವಿ ಕಕ್ಕಿಲ್ಲಾಯರಂಥ ನಾಯಕರು ತಮ್ಮ ಐಶ್ವರ್ಯಗಳನ್ನೂ, ಸುಖಗಳನ್ನೂ ತ್ಯಜಿಸಿ ದುಡಿಯುವ ಜನರೊಂದಿಗೆ ಜೀವಿಸುತ್ತಾ, ಅವರ ಕಷ್ಟಗಳನ್ನು ಅನುಭವಿಸುತ್ತಾ, ಅವರಿಗಾಗಿ ಹೋರಾಡುತ್ತಾ, ಅವರಿಗಾಗಿ ಜೈಲುಗಳಿಗೂ ಹೋದರು, ಇವೆಲ್ಲವುಗಳಿಂದ ಈ ನಾಯಕರಿಗೆ ವೈಯಕ್ತಿಕವಾಗಿ ಏನೂ ದೊರೆಯುವಂಥದ್ದಿರಲಿಲ್ಲ, ಆದರೆ ಇವುಗಳಿಂದ ಅವರು ಅನುಕಂಪವನ್ನು ಕಲಿತರು, ಹೀಗೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಭ್ರಾತೃತ್ವಗಳಿಗಾಗಿ ದುಡಿದರು.

Prof. Apoorvanand, eminent teacher, writer and commentator, will deliver the BV Kakkilaya Inspired Oration – 2022, titled Innards of Contemporary Social Discourse, on Saturday, August 27, 2022 at Bishop Jathanna Auditorium, Sahodaya, Balmatta, Mangaluru at 4.30pm.

The annual BV Kakkilaya Inspired Orations are being organised as a tribute to the life and work of Sri BV Kakkilaya (1919-2012), who was a freedom fighter, leader of Karnataka unification movement, leader of Communist Party of India and All India Trade Union Congress, member of the first Rajya Sabha and Karnataka State Assembly, award winning writer and thinker, and to promote alternative thought and approach to the problems of the suffering masses of our country. The oration is being organized by Hosatu Monthly, Bangalore, MS Krishnan Trust, Bangalore, and Samadarshi Vedike, Mangalore.

Dr. Apoorvanand is Professor at Department of Hindi, University of Delhi, and is also a writer, columnist and political commentator. Born in Muzaffarpur, Bihar, he received his undergraduate education from Bihar University and earned his Masters and Ph.D. from Patna University. He started his teaching career at T.P.S. College, Patna, Magadh University, as a Lecturer (1996-1999), and later worked as Associate Professor at Mahatma Gandhi Antarrashtriya Hindi Vishvavidyalaya (2000- 2004) and joined the University of Delhi as Professor at the Hindi Department where he has been instrumental in redesigning the department’s academic program.

Prof. Apoorvanand was part of the core group that designed the National Curriculum Framework for School Education in 2005 and was a member of the national Focus Group on Teaching of Indian Languages formed by the National Council for Educational Research and Training (NCERT). He has worked with the Committee to Advise on Renovation and Rejuvenation of Higher Education in India under the Chairmanship of Prof. Yash Pal, working to craft a new vision plan for the sector of higher education in India. In 2010, Prof. Apoorvanand was Visiting Scholar at the Center for the Advanced Study of India at the University of Pennsylvania, USA.

Prof. Apoorvanand’s interest is in developing Marxist Aesthetics in Hindi Literature. Sundar Ka Swapna (2001), Sahitya Ka Ekant, Teen Sau Ramayan (Edited) (2008), The Idea of a University and Education at the Crossroads (2018) are his published literary works. He is a regular columnist at The Wire and also frequently writes, both in Hindi and also in English, on Scroll, Satya Hindi, Al Jazeera and others, on the issues of education, culture, communalism, violence and human rights. He also appears on Indian television as a panelist on issues concerning higher education, language and communalism.

We hereby extend a cordial welcome to everyone.

 ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ – 2022

ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ – 2022 ನ್ನು ಇದೇ ಶನಿವಾರ, ಆಗಸ್ಟ್ 27, 2022ರಂದು ಸಂಜೆ 4.30 ಗಂಟೆಗೆ ಬಿಷಪ್ ಜತ್ತನ್ನ ಸಭಾಂಗಣ, ಸಹೋದಯ, ಬಲ್ಮಠ, ಮಂಗಳೂರಿನಲ್ಲಿ  ಆಯೋಜಿಸಲಾಗಿದ್ದು, ಹಿರಿಯ ಪ್ರಾಧ್ಯಾಪಕ, ಲೇಖಕ ಹಾಗೂ  ರಾಜಕೀಯ ವಿಮರ್ಶಕರಾದ ಪ್ರೊ. ಅಪೂರ್ವಾನಂದ ಅವರು ಇಂದಿನ ಸಾಮಾಜಿಕ ವಿದ್ಯಮಾನಗಳ ಆಂತರ್ಯ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರು, ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ನಾಯಕರು, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಸದಸ್ಯರು, ಪ್ರಶಸ್ತಿ ವಿಜೇತ ಲೇಖಕರು ಹಾಗೂ ಚಿಂತಕರಾಗಿದ್ದ ಶ್ರೀ ಬಿವಿ ಕಕ್ಕಿಲ್ಲಾಯರ (1919-2012) ಗೌರವಾರ್ಥ, ದೇಶದ ಬಹು ಪಾಲು ಜನರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪರ್ಯಾಯ ಚಿಂತನೆಯನ್ನೂ, ಮಾರ್ಗೋಪಾಯಗಳನ್ನೂ ಪ್ರಚೋದಿಸುವ ಉದ್ದೇಶದಿಂದ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಈ ಉಪನ್ಯಾಸಗಳನ್ನು ಬೆಂಗಳೂರಿನ ಹೊಸತು ಮಾಸ ಪತ್ರಿಕೆ ಹಾಗೂ ಎಂಎಸ್ ಕೃಷ್ಣನ್ ಟ್ರಸ್ಟ್ ಮತ್ತು ಮಂಗಳೂರಿನ ಸಮದರ್ಶಿ ವೇದಿಕೆ ಆಯೋಜಿಸುತ್ತಿವೆ.

ಡಾ. ಅಪೂರ್ವಾನಂದ್ ಅವರು ದಿಲ್ಲಿ ವಿಶ್ವವಿದ್ಯಾನಿಲಯದ ಹಿಂದಿ ಭಾಷೆಯ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಲೇಖಕರೂ, ಅಂಕಣಕಾರರೂ, ರಾಜಕೀಯ ವಿಮರ್ಶಕರೂ ಆಗಿದ್ದಾರೆ. ಬಿಹಾರದ ಮುಜಫರ್‌ಪುರದಲ್ಲಿ ಜನಿಸಿದ ಅಪೂರ್ವಾನಂದ್, ಬಿಹಾರ್ ವಿಶ್ವವಿದ್ಯಾನಿಲಯದಲ್ಲಿ ಪದವಿಯನ್ನು ಪಡೆದು ಬಳಿಕ ಪಟ್ನಾ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನೂ, ಪಿಎಚ್‌ಡಿಯನ್ನೂ ಪಡೆದಿದ್ದಾರೆ. ಮಗಧ ವಿಶ್ವವಿದ್ಯಾನಿಲಯಕ್ಕೆ ಸೇರಿದ ಪಟ್ನಾದ ಟಿಪಿಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಬಳಿಕ (1996-99) ಮಹಾತ್ಮಾ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾನಿಲಯದಲ್ಲಿ ಉಪಪ್ರಾಧ್ಯಾಪಕರಾಗಿ ದುಡಿದು (2000-2004), ಆ ಬಳಿಕ ದಿಲ್ಲಿ ವಿಶ್ವವಿದ್ಯಾನಿಲಯದ ಹಿಂದಿ ಭಾಷಾ ವಿಭಾಗದಲ್ಲಿ ಪ್ರೊಫೆಸರ್ ಆಗಿ ದುಡಿಯುತ್ತಾ, ತಮ್ಮ ವಿಭಾಗದ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೊಸ ರೂಪವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಶಾಲಾ ಶಿಕ್ಷಣಕ್ಕಾಗಿ 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಸಿದ್ಧಪಡಿಸಿದ ಕೇಂದ್ರ ಸಮಿತಿಯ ಸದಸ್ಯರಾಗಿದ್ದ ಪ್ರೊ. ಅಪೂರ್ವಾನಂದ್, ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಯ ಭಾರತೀಯ ಭಾಷಾ ಶಿಕ್ಷಣದ ರಾಷ್ಟ್ರೀಯ ಸಮಿತಿಯ ಸದಸ್ಯರೂ ಆಗಿದ್ದರು. ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕಾಗಿ ಹೊಸ ದೂರದರ್ಶಿ ಯೋಜನೆಯನ್ನು ಸಿದ್ಧಪಡಿಸಲು ಪ್ರೊ. ಯಶಪಾಲ್ ನೇತೃತ್ವದಲ್ಲಿ ರಚಿಸಲಾಗಿದ್ದ ಭಾರತದಲ್ಲಿ ಉನ್ನತ ಶಿಕ್ಷಣದ ನವೀಕರಣ ಹಾಗೂ ಪುನಶ್ಚೇತನದ ಸಲಹಾ ಸಮಿತಿಯಲ್ಲೂ ಕೆಲಸ ಮಾಡಿದ್ದರು. ಅಮೆರಿಕಾದ ಪೆನಿಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಭಾರತದ ಬಗ್ಗೆ ಉನ್ನತ ಅಧ್ಯಯನದ ಕೇಂದ್ರದಲ್ಲಿ ಸಂದರ್ಶಕ ವಿದ್ವಾಂಸರಾಗಿ 2010ರಲ್ಲಿ ಅವರು ನಿಯುಕ್ತರಾಗಿದ್ದರು. ಹಿಂದಿ ಸಾಹಿತ್ಯದಲ್ಲಿ ಮಾರ್ಕ್ಸ್‌ವಾದಿ ಮೀಮಾಂಸೆಯನ್ನು ಬೆಳೆಸುವ ಬಗ್ಗೆ ಪ್ರೊ. ಅಪೂರ್ವಾನಂದ್ ಅವರು ವಿಶೇಷ

ಆಸಕ್ತಿಯನ್ನು ಹೊಂದಿದ್ದಾರೆ. ಸುಂದರ್ ಕಾ ಸ್ವಪ್ನ (2001), ಸಾಹಿತ್ಯ ಕಾ ಏಕಾಂತ್, ತೀನ್ ಸೌ ರಾಮಾಯಣ್ (ಸಂಪಾದನೆ) (2008), ದಿ ಐಡಿಯಾ ಆಫ್ ಎ ಯುನಿವರ್ಸಿಟಿ ಮತ್ತು ಎಜುಕೇಶನ್ ಅಟ್ ದ ಕ್ರಾಸ್‌ರೋಡ್ಸ್ (2018) ಅವರ ಪ್ರಕಟಿತ ಕೃತಿಗಳು. ದಿ ವೈರ್ ಪತ್ರಿಕೆಗೆ ನಿಯತ ಅಂಕಣಕಾರರಾಗಿರುವ ಪ್ರೊ. ಅಪೂರ್ವಾನಂದ್ ಅವರು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳೆರಡರಲ್ಲೂ ಸ್ಕ್ರಾಲ್, ಸತ್ಯ ಹಿಂದಿ, ಅಲ್ ಜಜೀರಾ ಮತ್ತಿತರ ಪತ್ರಿಕೆಗಳಲ್ಲಿ ಶಿಕ್ಷಣ, ಸಂಸ್ಕೃತಿ, ಮತೀಯವಾದ, ಹಿಂಸೆ ಮತ್ತು ಮಾನವ ಹಕ್ಕುಗಳ ಬಗ್ಗೆ ಆಗಾಗ ಬರೆಯುತ್ತಿರುತ್ತಾರೆ. ಭಾರತೀಯ ಟಿವಿ ವಾಹಿನಿಗಳಲ್ಲಿ ಉನ್ನತ ಶಿಕ್ಷಣ, ಭಾಷಾ ಜ್ಞಾನ ಹಾಗೂ ಮತೀಯವಾದಗಳ ಬಗ್ಗೆ ಚರ್ಚೆಗಳಲ್ಲಿ ಭಾಗವಹಿಸುತ್ತಿರುತ್ತಾರೆ.

ನಾವು ಎಲ್ಲರನ್ನೂ ಆದರದಿಂದ ಆಹ್ವಾನಿಸುತ್ತಿದ್ದೇವೆ.

Leave a Reply

Your email address will not be published. Required fields are marked *